ಮಧ್ಯ ಪ್ರದೇಶದಲ್ಲಿ ಗೀರ್ ಹಾಗೂ ಖಿಲಾರಿ ತಳಿಯ ಸಂಯೋಗದಿಂದ ಬಂದ ಒಂದು ಉತ್ತಮ ತಳಿ ನಿಮರಿ ಅಥವಾ ನಿಮಾರಿ. ಉತ್ತಮ ಕೆಲಸಗಾರ ತಳಿ ಇದು. ಇದರ ದೊಡ್ಡ ದೇಹ, ಉಬ್ಬು ಹಣೆ ಗೀರ್ ತಳಿಯದಾದರೆ ಖಿಲಾರಿಯ ದೃಡತೆ, ಚುರುಕು, ಸಿಡುಕು ಸ್ವಭಾವಗಳು ಬಂದಿದ್ದು ಖಿಲಾರಿಯಿಂದ. ನಿಮರಿಯ ಮೂಲ ಮಧ್ಯಪ್ರದೇಶದ ಕರ್ಗಾಂವ್ ಮತ್ತು ಖಾಂಡ್ವ ಪ್ರದೇಶ. ನಂತರ ಇದರ ಪ್ರಸಿದ್ಧಿ ಹೆಚ್ಚತೊಡಗಿ ದೊಡ್ಡ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮತ್ತು ಭಾರತದ ಉಳಿದ ಪ್ರದೇಶಗಳ ಕೊಟ್ಟಿಗೆಗಳನ್ನು ತುಂಬತೊಡಗಿತು. ಇಂದು ಭಾರತದ ಅನೇಕ ರಾಜ್ಯಗಳಲ್ಲಿ ಇದನ್ನು ಕಾಣಬಹುದು. ನಿಮರಿ ಅತ್ಯುತ್ತಮ ಕೆಲಸಗಾರ ತಳಿ. ಅಪರೂಪಕ್ಕೆ ಕೆಲವು ಹಸುಗಳು ಹೆಚ್ಚು ಹಾಲು ನೀಡುವುದಿದೆಯಾದರೂ ನಿಮರಿಯ ಮುಖ್ಯ ಉಪಯೋಗವಿರುವುದು ಉಳುಮೆಗೇ. ನಿಮರಿ ತಳಿ ಸದೃಡ, ಸುಂದರ ಹಾಗೂ ಗಂಭೀರ. ಸಾಮಾನ್ಯವಾಗಿ ಇವುಗಳ ದೇಹದ ಮೇಲೆ ಕೆಂಪು, ಬಿಳಿಪಟ್ಟೆಗಳಿರುತ್ತವೆ.. ಇವುಗಳದ್ದು ಉದ್ದ ಮುಖ, ಉಬ್ಬಿದ ಹಣೆ, ಎತ್ತರವಾದ ಡುಬ್ಬ, ನೇರ ನಿಡಿದಾದ ಕಾಲುಗಳು, ಉದ್ದವಾಗಿ ನೆಲತಾಕುವಂತೆ ಬಾಲ. == ಚಿತ್ರಗಳು == == ಆಧಾರ/ಆಕರ == 'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.